ಕಾಸರಗೋಡು: ಜಿಲ್ಲಾ ಪಂಚಾಯತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು. ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಪಟ್ಟಿ ಬಿಡುಗಡೆಗೊಳಿಸಿದರು. ಕುಂಜತ್ತೂರು-ವಿಜಯ ಕುಮಾರ್ ರೈ, ಪುತ್ತಿಗೆ-ಮಣಿಕಂಠ ರೈ, ಬದಿಯಡ್ಕ-ರಾಮಪ್ಪ ಮಂಜೇಶ್ವರ, ದೇಲಂಪಾಡಿ- ಬೇಬಿ ಮಣಿಯೂರು, ಕುತ್ತಿಕೋಲು- ಮನುಲಾಲ್ ಮೇಲತ್, ಕಳ್ಳಾರ್- ಧನ್ಯ ಸುಮೋದ್, ಚಿತ್ತಾರಿಕಲ್- ಕೆ.ಎಸ್.ರಮಣಿ, ಕಯ್ಯೂರು- ಟಿ.ಡಿ.ಭರತನ್, ಮಡಿಕೈ- ಎ.ವೇಲಾಯುಧನ್, ಉದುಮ- ಸೌಮ್ಯ, ಸಿವಿಲ್ ಸ್ಟೇಶನ್- ಪಿ.ಆರ್.ಸುನಿಲ್ ಎಂಬಿವರು ಅಭ್ಯರ್ಥಿಗಳಾಗಿರುವರು. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಎಂ ಎಲ್. ಅಶ್ವಿನಿ, ವಲಯ ಅಧ್ಯಕ್ಷ ಅಡ್ವ. ಕೆ. ಶ್ರೀಕಾಂತ್, ಮನುಲಾಲ್ ಮೇಲತ್, ಪಿ.ಆರ್.ಸುನಿಲ್, ಬಾಬುರಾಜ್ ಮೊದಲಾದವರು ಉಪಸ್ಥಿತರಿದ್ದರು.

0 Comments