Ticker

6/recent/ticker-posts

Ad Code

ಯುವಕರಿಗೆ ತಲವಾರಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣ; ತಲೆಮರೆಸಿಕೊಂಡ ಆರೋಪಿಗಳ ಸೆರೆ

 



ಕಾಞಂಗಾಡ್: ಇಲ್ಲಿನ ಅಂಬಲತ್ತರ ನಿವಾಸಿಗಳಾದ ಮುನೀರ್, ಸಮೀರ್ ಎಂಬಿವರಿಗೆ ತಲವಾರಿನಿಂದ ಇರಿದು ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು  ಬಂಧಿಸಿದ್ದಾರೆ. ಕಾಞಂಗಾಡ್ ಮೂರನೇ ಮೈಲು ನಿವಾಸಿಗಲಾದ ಹಮೀದ್(56), ಅಲ್ತಾಫ್(29) ಬಂಧಿತರು. 2021 ರಲ್ಲಿ  ಕೇಸಿಗೆ ಸಂಬಂಧಿಸಿದ ಘಟನೆ ನಡೆದಿತ್ತು. ಉಡುಪಿ ಬಳಿಯ ಹೆಬ್ರಿಯಲ್ಲಿ ಆರೋಪಿಗಳು ಅಡಗಿ ಕುಳಿತಿದ್ದಾರೆಂಬ ಮಾಹಿತಿಯನ್ವಯ ಅಂಬಲತ್ತರ ಪೊಲೀಸರು ದಾಳಿ ನಡೆಸಿದ್ದರು. ಬೇಕಲ ಡಿ.ವೈ.ಎಸ್.ಪಿ.ಮನೋಜ್.ವಿ.ವಿ. ಅವರ ಮೇಲ್ನೋಟದಲ್ಲಿ ಅಂಬಲತ್ತರ ಇನ್ಸ್ಪೆಕ್ಟರ್ ಯು.ಪಿ.ವಿಪಿನ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

Post a Comment

0 Comments