Ticker

6/recent/ticker-posts

Ad Code

ದುಬೈ ಉದ್ಯೋಗಿಯ ಮನೆಯ ಹಿಂಬಾಗದ ಗ್ರಿಲ್ಸ್ ಮುರಿದು 20 ಪವನು ಚಿನ್ನಾಭರಣ ಕಳವು

ಕುಂಬಳೆ: ಮನೆಯ ಹಿಂಭಾಗದ ಕಬ್ಬಿಣದ ಗ್ರಿಲ್ಸ್ ತುಂಡರಿಸಿ ಬೀಗ ಮುರಿದು ಒಳನುಗ್ಗಿದ ಕಳ್ಳರು 20 ಪವನು ಚುನ್ನಾಭರಣ ಕಳವುಗೈದ ಘಟನೆ ನಡೆದಿದೆ. ಪೆರ್ಮುದೆ, ಪೆರಿಯಡ್ಕ ಮಂಜಾಡಿಯ ಶರೀಫ್ ಎಂಬವರ ಮನೆಯಿಂದ ಕಳವು ನಡೆದಿದೆ. ಶರೀಫ್ ದುಬೈಯಲ್ಲಿದ್ದಾರೆ. ಪತ್ನಿ ಮತ್ತು ಮಕ್ಕಳು 2 ದಿನಗಳ ಹಿಂದೆ ಸಂಬಂಧಿಕರ ಮನೆಗೆ ಹೋಗಿದ್ದು ನಿನ್ನೆ (ಆದಿತ್ಯವಾರ) ಸಾಯಂಕಾಲ ಹಿಂತಿರುಗಿದ್ದರು. ಈ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.ಮನೆಯ ಒಳಗೆ ಪ್ರವೇಶಿಸಿದ ಕಳ್ಳರು ಕಪಾಟು ಮುರಿದು ಅದರೊಳಗಿದ್ದ ಚಿನ್ನಾಭರಣ ದೋಚಿದ್ದಾರೆ. ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಸಹ ಆಗಮಿಸಿ ಮಾಹಿತಿ ಸಂಗ್ರಹಿಸಿದರು

Post a Comment

0 Comments