Ticker

6/recent/ticker-posts

Ad Code

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅಕ್ಟೋಬರ್ 22 ರಂದು ಶಬರಿಮಲೆಗೆ ಬೇಟಿ


 ತಿರುವನಂತಪುರಂ: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 22 ರಂದು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಮಾಡುವರು. 21 ರಂದು ಸಾಯಂಕಾಲ ಅವರು ತಿರುವನಂತಪುರಂಗೆ ತಲುಪುವ ಅವರು ರಾಜಭವನದಲ್ಲಿ ತಂಗುವರು. 22 ರಂದು ಬೆಳಗ್ಗೆ 9.30 ಕ್ಕೆ ಹೆಲಿಕಾಪ್ಟರ್ ಮೂಲಕ ನೀಲಯ್ಕಲ್, ಅಲ್ಲಿಂದ ಕಾರು ಮಾರ್ಗವಾಗಿ ಪಂಪೆ, ಅನಂತರ ಗೂರ್ಖಾ ಫೋರ್ಸ್ ವಾಹನದಲ್ಲಿ ಶಬರಿಮಲೆಗೆ ಹೋಗುವರು. 12.20 ರಿಂದ 1 ಗಂಟೆಯ ವರೆಗೆ ಅವರು ಅಯ್ಯಪ್ಪ ದರ್ಶನ ಮಾಡುವರು. ಅನಂತರ ಅತಿಥಿ ಮಂದಿರದಲ್ಲಿ ತಂಗುವರು. 3 ಗಂಟೆಯ ನಂತರ ಹಿಂತಿರುಗುವ ಅವರು ಪಂಪೆ, ನೀಲಯ್ಕಲ್ ದಾರಿಯಾಗಿ ತಿರುವನಂತಪುರಕ್ಕೆ ಹಿಂತಿರುಗುವರು. 23 ರಂದು ಅವರು ಶಿವಗಿರಿ ಸಹಿತ ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

Post a Comment

0 Comments