ಜಾರ್ಖಂಡ್ ನಲ್ಲಿ ಬಾಂಬು ಸ್ಪೋಟ ನಡೆಸಿ ಮೂರು ಮಂದಿ ಪೊಲೀಸರನ್ನು ಹತ್ಯೆಗೈದ ನಂತರ ಕೇರಳದಲ್ಲಿ ಬಂದು ಅವಿತಿದ್ದ ನಕ್ಸಲೈಟ್ ಆರೋಪಿಯನ್ನು ಎನ್.ಐ.ಎ.ಬಂಧಿಸಿದೆ. ಜಾರ್ಖಂಡ್ ನಿವಾಸಿ ಸಹನ್ ಟುಟಿ ಬಂಧಿತ ಆರೋಪಿ.ಮುನ್ನಾರಿನಲ್ಲಿ ಅನ್ಯ ರಾಜ್ಯ ಕಾರ್ಮಿಕರ ಸೋಗಿನಲ್ಲಿ ಪತ್ನಿಯ ಜತೆ ಕೂಲಿ ಕೆಲಸದಲ್ಲಿ ನಿರತನಾಗಿದ್ದ ಆರೋಪಿಯನ್ನು ನಿನ್ನೆ (ಸೋಮವಾರ) ಬಂಧಿಸಲಾಯಿತು. 2021 ರಲ್ಲಿ ಜಾರ್ಖಂಡ್ ಒಳಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಬಾಂಬು ಸ್ಪೋಟದಲ್ಲಿ ಕರ್ತವ್ಯದಲ್ಲಿದ್ದ ಮೂರು ಮಂದಿ ಪೊಲೀಸರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಆದರೆ ಮುಖ್ಯ ಆರೋಪಿ ಸಹನ್ ಟುಟಿ ತಲೆಮರೆಸಿಕೊಂಡಿದ್ದನು. ಈತ ಇದೀಗ ಸೆರೆಯಾಗಿದ್ದಾನೆ.
0 Comments