Ticker

6/recent/ticker-posts

Ad Code

ಮನೆಯಲ್ಲಿ ದಾಸ್ತಾನು ಇರಿಸಿದ್ದ 5.8 ಗ್ತಾಂ ಮೆಥಾಫಿಟಮಿನ್ ಮಾದಕವಸ್ತು ಸಹಿತ ಓರ್ವನ ಬಂಧನ


 ಕಾಸರಗೋಡು: ಮನೆಯಲ್ಲಿ ದಾಸ್ತಾನು ಇರಿಸಿದ್ದ 5.831 ಗ್ರಾಂ ಎಂಡಿಎಂಎ (ಮೆಥಾಫಿಟಮಿನ್) ಸಹಿತ ಓರ್ವನನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಚೆರ್ವತ್ತೂರು ಮುಂಡಕಂಡಂ ನಿವಾಸಿ ನಿತಿನ್(32) ಬಂಧಿತ ಆರೋಪಿ. ಎಕ್ಸೈಸ್ ಇನ್ಸ್ಪೆಕ್ಟರ್ ವಿಷ್ಣು ಪ್ರಸಾದ್ ಹಾಗೂ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬಂಧಿತ ಆರೋಪಿ ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದಬ ವರದಿಯ ಹಿನ್ನೆಲೆಯಲ್ಲಿ ಎಕ್ಸೈಸ್ ಅಧಿಕಾರಿಗಳು ಆರೋಪಿಯ ಮೇಲೆ ನಿಗಾ ಇರಿಸಿದ್ದರು. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರುಗಳಾದ  ಪ್ರಮೋದ್ ಕುಮಾರ್,  ಕೆ.ವಿ.ಸುರೇಶ್,  ನೌಷಾದ್, ಮಂಜುನಾಥ ವಿ, ಧನ್ಯ ಟಿ.ವಿ.ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments