ಬದಿಯಡ್ಕ: ಎಣ್ಮಕಜೆಯ ಕುಞಪಾರ ಎಂಬಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬದಿಯಡ್ಕ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. 4 ಮಂದಿ ಓಡಿ ಪರಾರಿಯಾಗಿದ್ದಾರೆ. ಆಟಕ್ಕೆ ಬಳಸಿದ 103820 ರೂ ಗಳನ್ನು ವಶಪಡಿಸಲಾಗಿದೆ. ನಿನ್ನೆ (ಆದಿತ್ಯವಾರ) ರಾತ್ರಿ 9.30 ಕ್ಕೆ ಕಾರ್ಯಾಚರಣೆ ನಡೆದಿದೆ.
ಅಡ್ಯನಡ್ಕ ಚವರ್ಕಾಡು ನಿವಾಸಿ ಗಿರೀಶ್ (36), ಸುರತ್ಕಲ್ ಥಾನ ನಿವಾಸಿ ಮುಹಮ್ಮದ್ ಹನೀಫ. (45), ಮಂಗಳೂರು ಮಣ್ಣಗುಡ್ಡೆ ಬಲ್ಲಾಳ್ ಬಾಗ್ ನಿವಾಸಿ ರಾಜ(55), ವಿಟ್ಲ ಕದಂಬುವನ ನಿವಾಸಿ ಪ್ರಸಾದ್(34), ಎಣ್ಮಕಜೆ ಪಳ್ಳಕಾನದ ಅಬ್ದುಲ್ಲ (55), ಮಂಗಳೂರು ಕುಳೂರು ಮಂದಾರ ಹೌಸ್ ನಿವಾಸಿ ರಾಧಾಕೃಷ್ಣ ನಾಯರ್(56) ಬಂಧಿತ ಆರೋಪಿ. ಬದಿಯಡ್ಕ ಎಸ್.ಐ ಅಖಿಲ್ ರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ದಾಳಿ ನಡೆದಿತ್ತು. ಎಸ್.ಐ, ಎ.ಎಸ್.ಐ.ಪ್ರಸಾದ್ ಹಾಗೂ ಇತರ ಅಧಿಕಾರಿಗಳು ವೇಷಪಲ್ಲಟ ನಡೆಸಿ ದಾಳಿ ನಡೆಸುವ ವೇಳೆ 4 ಜನ ಓಡಿ ಪರಾರಿಯಾಗಿದ್ದು ಇವರಿಗೆ ಬಿದ್ದು ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರ
0 Comments