ತಿರುವನಂತಪುರಂ: ಸ್ಥಳೀಯಾಡಳಿತೆ ಚುನಾವಣೆಯ ಮುಂಚಿತವಾಗಿ ವಾರ್ಡುಗಳ ಮೀಸಲಾತಿ ಚೀಟಿ ಎತ್ತುವ ಪ್ರಕ್ರಿಯೆ ಇಂದಿನಿಂದ (ಸೋಮವಾರ) ಪ್ರಾರಂಭವಾಗಲಿದೆ. ರಾಜ್ಯದ 941 ಪಂಚಾಯತುಗಳ ವಾರ್ಡುಗಳ ಮೀಸಲಾತಿ ಇಂದಿನಿಂದ 16 ರ ವರೆಗೆ ನಿರ್ಣಯವಾಗಲಿದೆ. 152 ಬ್ಲಾಕ್ ಪಂಚಾಯತುಗಳ ಮೀಸಲಾತಿ ಈ ತಿಂಗಳ 18 ರಂದು, 14 ಜಿಲ್ಲಾ ಪಂಚಾಯತುಗಳ ಮೀಸಲಾತಿ 21 ರಂದು ಚೀಟಿ ಎತ್ತಿ ನಿರ್ದರಿಸಲಾಗುವುದು. ಮಹಿಳೆ, ಪರಿಶಿಷ್ಟ ಜಾತಿ ಮಹಿಳೆ ಹಾಗೂ ಗಂಡಸು, ಪರಿಶಿಷ್ಟ ವರ್ಗ ಮಹಿಳೆ ಹಾಗೂ ಗಂಡಸು ಎಂಬೀ ಮೀಸಲಾತಿಗಳ ನಿರ್ಣಯವಾಗಲಿದೆ.
0 Comments