Ticker

6/recent/ticker-posts

Ad Code

ಬಿಜೆಪಿ ಕುಂಬ್ಡಾಜೆ ಪಂಚಾಯತು ಕಾರ್ಯಕರ್ತರ ಸಮಾವೇಶ, ಅಭಿನಂದನಾ ಕಾರ್ಯಕ್ರಮ ನಾಳೆ


 ಕುಂಬ್ಡಾಜೆ: ಬಿಜೆಪಿ ಕುಂಬ್ಡಾಜೆ ಪಂಚಾಯತು ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ ನಾಳೆ (ಅಕ್ಟೋಬರ್ 19 ಆದಿತ್ಯವಾರ) ಬೆಳಗ್ಗೆ 10 ರಿಂದ ಮಾರ್ಪನಡ್ಕ ಶ್ರೀ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ಜರಗಲಿರುವುದು. ಕಾರ್ಯಕ್ರಮವನ್ನು ಪಕ್ಷದ ನಿಕಟಪೂರ್ವ ರಾಜ್ಯಾಧ್ಯಕ್ಷ ಸಿ.ಕೆ.ಪದ್ಮನಾಭನ್ ಉದ್ಘಾಟಿಸುವರು. ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸುವರು. ಬಿಜೆಪಿ ಮಂಗಳೂರು ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಹಿರಿಯರಾದ ಎಂ.ಸಂಜೀವ ಶೆಟ್ಟಿ, ಗೋಪಾಲಕೃಷ್ಣ ಎಂ, ರವೀಶ ತಂತ್ರಿ ಕುಂಟಾರು, ಸುಧಾಮ ಗೋಸಾಡ, ಸುನಿಲ್ ಪಿ.ಆರ್, ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಹರೀಶ್ ನಾರಂಪಾಡಿ, ರಘು ಮಾಚಾವು ಸಹಿತ ಹಲವರು ಭಾಗವಹಿಸುವರು

Post a Comment

0 Comments