Ticker

6/recent/ticker-posts

Ad Code

ಮೊಗೇರ ದೈವಾರಾಧನೆತ ನೆಲೆ ಬೆಲೆ ವಿಚಾರಗೋಷ್ಠಿ; ಪೂರ್ವಭಾವಿ ಸಭೆ


 ಕಿಳಿಂಗಾರು: ಶ್ರೀ ಧರ್ಮದೈವ ಬ್ರಹ್ಮ ಮೊಗೇರ ದೈವ ಪಾತ್ರಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಸಭೆಯು ಇತ್ತೀಚೆಗೆ ಕಿಳಿಂಗಾರು ಭರತೇಶ್ವರ (ಶ್ರೀ ಉಳ್ಳಾಕ್ಳು - ಶ್ರೀ ಧೂಮಾವತಿ ದೈವದ ಪಾತ್ರಿ ,ಕುಂಟಿಕಾನ ಮಠ) ಅವರ ಮನೆಯಲ್ಲಿ ನಡೆಯಿತು. ಅಕ್ಟೋಬರ್ 19 ರವಿವಾರದಂದು  ಮೊಗೇರ ದೈವಾರಾಧನೆಯ ನೆಲೆ -ಬೆಲೆ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಗಂಗಾಧರ ಗೋಳಿಯಡ್ಕ ಮತ್ತು ಸುಂದರ ಬಾರಡ್ಕ ವಿಶೇಷ ಅತಿಥಿಗಳಾಗಿ ಪಾಲ್ಗೊಂಡರು. ಅಲ್ಲದೆ, ಮುಂಬರುವ ವಿಚಾರಗೋಷ್ಠಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಆ ನಿಟ್ಟಿನಲ್ಲಿ , ಕಾಸರಗೋಡು, ಮಂಜೇಶ್ವರ ಪ್ರದೇಶದ ಎಲ್ಲಾ ಮೊಗೇರ ಬಾಂಧವರು ಕೂಡ ಬರುವ 19 ರಂದು ರವಿವಾರ, ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಬ್ರಹ್ಮ ಮೊಗೇರ ಪರಿವಾರ ದೈವಗಳ ಸಾನಿಧ್ಯ ರಾಜೀವ ಭವನ ಕಿದೂರು, ಕುಂಟಂಗೇರಡ್ಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ವಿಚಾರಗೋಷ್ಠಿಯನ್ನು ಯಶಸ್ವಿಗೊಳಿಸುವಂತೆ  ಸಭಿಕರಲ್ಲಿ ಭಿನ್ನವಿಸಿಕೊಂಡರು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

Post a Comment

0 Comments