Ticker

6/recent/ticker-posts

Ad Code

ಬಿಜೆಪಿ ಮಂಜೇಶ್ವರ ಪಂಚಾಯತು ಚುನಾವಣಾ ಕಛೇರಿ ಉದ್ಘಾಟನೆ


 ಮಂಜೇಶ್ವರ:  ಭಾರತೀಯ ಜನತಾ ಪಾರ್ಟಿ ಮಂಜೇಶ್ವರ ಪಂಚಾಯತು ಚುನಾವಣಾ ಸಮಿತಿ ಕಾರ್ಯಾಲಯದ ಉದ್ಘಾಟನೆಯನ್ನು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್  ನೆರವೇರಿಸಿದರು. ಕೇರಳದಲ್ಲಿ ವ್ಯಾಪಕವಾಗಿರುವ ನಿರುದ್ಯೋಗ, ಕುಂಠಿತ ಅಭಿವೃದ್ಧಿ  ಎಂಬಿವುಗಳ ನಿವಾರಣೆಗೆ ರಾಜಕೀಯ ಬದಲಾವಣೆ ಅತ್ಯಗತ್ಯ ಎಂದವರು ಹೇಳಿದರು.

 ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ.ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯರುಗಳಾದ ಅಡ್ವ.ವಿ.ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ಚಂದ್ರ ನಾಯಕ್, ಇತರರಾದ ಲೋಕೇಶ್ ನೋಂಡ, ಯಾದವ ಬಡಾಜೆ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments