ತಿರುವನಂತಪುರಂ: ಶಬರಿಮಲೆಯಲ್ಲಿ ಚಿನ್ನಾಭರಣ ನಾಪತ್ತೆಯಾದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಬೆಂಗಳೂರು ಉದ್ಯಮಿಯನ್ನು ಬಂಧಿಸಿದೆ. ಬೆಂಗಳೂರು ಉದ್ಯಮಿ ಉಣ್ಣಿಕೃಷ್ಣನ್ ಪೋಟ್ಟಿ ಅವರನ್ನು ವಿಶೇಷ ತನಿಖಾ ತಂಡವು ನಿನ್ನೆ (ಗುರುವಾರ) ತಿರುವನಂತಪುರಂ ವಸತಿಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು (ಶುಕ್ರವಾರ) ಬಂಧನ ದಾಖಲಿಸಿದೆ. ಇಂದು ಮಧ್ಯಾಹ್ನ ಆರೋಪಿಯನ್ನು ಪತ್ತನಂತಿಟ್ಟಕ್ಕೆ ಕೊಂಡೊಯ್ಯಲಾಗುವುದು. ಅನಂತರ ರಾಣಿ ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗುವುದು. ಇನ್ನಷ್ಟು ವಿಚಾರಣೆ ನಡೆಸಲು ಉಣ್ಣಿಕೃಷ್ಣನ್ ಪೋಟ್ಟಿ ಅವರನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆಯ ದ್ವಾರಪಾಲಕದಲ್ಲಿ ಲೇಪಿಸಿರುವ ಚಿನ್ನ, ಗರ್ಭಗುಡಿಯ ಬಾಗಿಲಿಗೆ ಲೇಪಿಸಿದ ಚಿನ್ನ ನಾಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡವು ತನಿಖೆ ನಡೆಸುತ್ತಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನ ಸಾಧ್ಯತೆಯಿದೆ
0 Comments