Ticker

6/recent/ticker-posts

Ad Code

ಕಾಡಾನೆ ದಾಳಿ; ಏಲಕ್ಕಿ ತೋಟದ ಕಾರ್ಮಿಕ ದಾರುಣ ಮೃತ್ಯು


 ಇಡುಕ್ಕಿಯಲ್ಲಿ ಕಾಡಾನೆ ದಾಳಿಯಲ್ಲಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಇಡುಕ್ಕಿ ಪೂಪ್ಪಾರ ನಿವಾಸಿ ಜೋಸೆಫ್ ವೇಲುಚಾಮಿ(62) ಮೃತಪಟ್ಟ ಕಾರ್ಮಿಕ. ಇಂದು (ಸೋಮವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಏಲಕ್ಕಿ ತೋಟದ ಕಾರ್ಮಿಕರಾಗಿದ್ದ ಜೋಸೆಫ್ ವೇಲುಚಾಮಿ, ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಜೋಸೆಫ್ ವೇಲುಚಾಮಿ ಘಟನೆ ನಡೆದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳು ಆಗಮಿಸಿ ಮೃತದೇಹವನ್ನು ಅಡಿಮಾಲಿ ತಾಲೂಕು ಆಸ್ಪತ್ರೆಗೆ ತಲುಪಿಸಿದರು.

Post a Comment

0 Comments