ಬದಿಯಡ್ಕ : ಭಾರತೀಯ ಚಲನ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಖ್ಯಾತ ಕನ್ನಡ ಚಲನಚಿತ್ರ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಸೂಪರ್ ಹಿಟ್ ಚಲನಚಿತ್ರ "ಕಾಂತಾರ -2" ನ.8 ಶನಿವಾರ ಸಂಜೆ 6.30 ರಿಂದ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.ಪ್ರದರ್ಶನ ಸಂಪೂರ್ಣ ಉಚಿತವಾಗಿರುತ್ತದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹರಿನಾರಾಯಣ ಮಾಸ್ಟರ್ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹಾಗೂ ಕಾಂತಾರ-2 ಗಳ ಪೋಷಕ ನಟ ರಾಧಾಕೃಷ್ಣ ಕುಂಬಳೆ ಮುಖ್ಯ ಅತಿಥಿಗಳಾಗಿರುವರು.ಕುಂಬಡಾಜೆ ಪಂಚಾಯತ್ ಸದಸ್ಯ ಹರೀಶ್ ಗೋಸಾಡ,ಡಾ. ವೇಣುಗೋಪಾಲ ಕಲಯತ್ತೋಡಿ, ರಾಮಚಂದ್ರ ಪದ್ಮಾರು, ಬಾಬು ಮಾಸ್ಟರ್ ಅಗಲ್ಪಾಡಿ,ಕರಿಯಪ್ಪ ಪಿ ಯಂ,ನಟರಾಜ್ ಕಲ್ಲಕಳಂಬಿ, ಸುಧಾಮ ಪದ್ಮಾರು, ದೀಪಕ್ ಬೆದ್ರುಕೂಡ್ಲು,ರಾಜೇಶ್ ಮಾಸ್ಟರ್ ಅಗಲ್ಪಾಡಿ,ರಮೇಶ್ ಕೃಷ್ಣ ಪದ್ಮಾರ್ ಮೊದಲಾದವರು ಭಾಗವಹಿಸುವರು.

0 Comments