Ticker

6/recent/ticker-posts

Ad Code

ಪೆರಡಾಲ ಸರಕಾರಿ ಪ್ರೌಢ ಶಾಲಾ ಶತಾಬ್ದಿ ಸಂಭ್ರಮಕ್ಕೆ ನಿರ್ಧಾರ, ಸಂಘಟಕ ಸಮಿತಿ ರೂಪೀಕರಣ ಸಭೆ ನ.9 ರಂದು


 ಬದಿಯಡ್ಕ: ಶೈಕ್ಷಣಿಕ ರಂಗದಲ್ಲಿ ಇತಿಹಾಸವನ್ನು ಸೃಷ್ಠಿಸಿದ  ಜಿ.ಎಚ್.ಎಸ್.ಪೆರಡಾಲ ಶಾಲೆಯ 100 ನೇ ವಾರ್ಷಿಕ ಆಚರಣೆಯನ್ನು ಶತಾಬ್ದಿ ಸಂಭ್ರಮ ಎಂಬ ವಿವಿಧ ಕಾರ್ಯಕ್ರಮದ ಮೂಲಕ  ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸಂಘಟಕ ಸಮಿತಿ ರೂಪೀಕರಣ ಸಭೆಯು ನವಂಬರ್ 9 ಆದಿತ್ಯವಾರ ಬೆಳಗ್ಗೆ 10 ಕ್ಕೆ ಶಾಲೆಯಲ್ಲಿ ನಡೆಯಲಿದೆ. ವಿಧ್ಯಾರ್ಥಿಗಳ ಹೆತ್ತವರು, ಹಳೆ ವಿದ್ಯಾರ್ಥಿಗಳು, ನಡುವೆ ನಿವೃತ್ತ ಶಿಕ್ಷಕರು, ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ. ಈ ಬಗ್ಗೆ ನಡೆದ ಸಮಾಲೋಚನೆ ಸಭೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮ.ಎಂ.ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತು ಅಧ್ಯಕ್ಷೆ ಶಾಂತ.ಬಿ.ಉದ್ಘಾಟಿಸಿದರು. ಜಿಲ್ಲಾ ಪಂಚಾಯತು ಸದಸ್ಯೆ ಶೈಲಜ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಗ್ರಾ.ಪಂ.ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ ಮೊದಲಾದವರು ಮಾತನಾಡಿದರು. ಮುಹಮ್ಮದ್ ಪಿಲಾಂಕಟ್ಟ, ಶ್ರೀಕಾಂತ್, ಮಾಹಿನ್ ಕೇಳೋಟ್, ಪ್ರಕಾಶ್ ಅಮ್ಮಣ್ಣಾಯ, ಚಂದ್ರನ್ ಪೊಯ್ಯಕಂಡ ಉಪಸ್ಥಿತರಿದ್ದರು .

Post a Comment

0 Comments