Ticker

6/recent/ticker-posts

Ad Code

ಎಸ್.ಐ.ಆರ್. (SIR) ಕಾರ್ಯವಿಧಾನಗಳು ಕನ್ನಡದಲ್ಲಿಯೂ ಲಭ್ಯ: ಚುನಾವಣಾ ಆಯೋಗದಿಂದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆ - ಬಿಜೆಪಿ


 ಎಸ್.ಐ.ಆರ್. (SIR) ಕಾರ್ಯವಿಧಾನಗಳು ಕನ್ನಡದಲ್ಲಿಯೂ ಲಭ್ಯ: ಚುನಾವಣಾ ಆಯೋಗದಿಂದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆ - ಬಿಜೆಪಿ


ಕಾಸರಗೋಡು: ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದ್ದು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಎಣಿಕೆ (ಎನ್ಯೂಮರೇಷನ್), ಫಾರ್ಮ್ 6 ಸೇರಿದಂತೆ ಎಲ್ಲ ಅರ್ಜಿ ನಮೂನೆಗಳು ಹಾಗೂ ನೋಟೀಸ್‌ಗಳನ್ನು ಕನ್ನಡ ಭಾಷೆಯಲ್ಲಿಯೂ ಲಭ್ಯವಾಗಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ದೊರೆತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಎಂ.ಎಲ್. ಅಶ್ವಿನಿ ತಿಳಿಸಿದರು.


ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸೇರಿದಂತೆ ಕಡತಗಳು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಬೇಕು ಎಂದು ರಾಷ್ಟ್ರೀಯ ಚುನಾವಣಾ ಆಯೋಗವು ನಿರ್ಧರಿಸಿದ್ದರೂ, ಅದಕ್ಕೆ ವಿರುದ್ಧವಾಗಿ ಎಣಿಕೆ (ಎನ್ಯೂಮರೇಷನ್) ಸೇರಿ ಎಲ್ಲಾ ನಮೂನೆಗಳನ್ನು ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ತಯಾರಿಸಲಾಗಿದೆ. ಕನ್ನಡ ಮಾತ್ರ ತಿಳಿದಿರುವ ಮತದಾರರಿಗೆ ಇದು ತೀವ್ರ ತೊಂದರೆ ಉಂಟುಮಾಡುತ್ತದೆ ಎಂದು ಅಶ್ವಿನಿ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿದ ಪತ್ರದಲ್ಲಿ ಒತ್ತಿಹೇಳಿದ್ದಾರೆ.

Post a Comment

0 Comments